Breaking News
recent

Hatric Hero ShivrajKumar Birthday 48th year



Hatric Hero Shivarajkumar rocks the Industry like never before.
Shivrajkumar Birthday Whishes 12/07/08. Shivana His now 48 years. and we all cant belive that he is 48 years. He looks so charm and so young.hats of him the way he carries his body language even after more than 90 film in his belt.








Shivrajkumar Birthday Movies Lined Up and Shivana His busy with no dates Still 2010.


Read the list.


ಶಿವರಾಜ್ ಈಗ ಬಿಡುವಿಲ್ಲದೇ ದುಡಿಯುತ್ತಿದ್ದಾರೆ. ಬಹು ನಿರೀಕ್ಷೆಯ 'ಮಾದೇಶ' ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ಹಾಡುಗಳು, ಪ್ರೋಮೋಸ್ ನೋಡಿ ಜನ ಮೆಚ್ಚಿದ್ದಾರೆ. ರವಿಶ್ರೀವತ್ಸ ಚಿತ್ರವನ್ನು ಅದ್ದೂರಿಯಾಗಿ ಚಿತ್ರೀಕರಿಸಿದ್ದಾರೆ. ಇದರ ನಂತರ 'ನಂದ', 'ಪರಮೇಶ್ ಪಾನ್ ವಾಲ' ಕಾದಿದೆ. 'ಎಕೆ 47' ಚಿತ್ರದ ನಂತರ ಓಂ ಪ್ರಕಾಶ್ ರಾವ್ ಜತೆಗೂಡಿ 'ಎಕೆ 97' ಚಿತ್ರ ನೀಡಲು ಮುಂದಾಗಿದ್ದಾರೆ. 'ನಂದ ನಂದಿತ' ಚಿತ್ರ ಕೊಟ್ಟ ರಮೇಶ್ ಕಶ್ಯಪ್ ಶಿವರಾಜ್ ಗೆ 'ಭಾಗ್ಯದ ಬಳೆಗಾರ ' ಗೆಟೆಪ್ ಹಾಕಿಸುತ್ತಿದ್ದಾರೆ. ಸಾಯಿಪ್ರಕಾಶ್ ನಿರ್ದೇಶನದ ಈಚಿತ್ರಕ್ಕೆ ಅಜಯ್ ಕುಮಾರ್ ಕಥೆ ಬರೆದಿದ್ದಾರೆ.ಎನ್ ಎಂ ಸುರೇಶ್ ನಿರ್ಮಾಣದ 'ಚೆಲುವೇ ನಿನ್ನ ನೋಡಲು' ಚಿತ್ರವನ್ನು ರಘುರಾಂ ನಿರ್ದೇಶನ ಮಾಡುತ್ತಿದ್ದಾರೆ. ಗಾಂಧಿ ಸ್ಮೈಲ್ ಎಂಬ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಲು ಶಿವರಾಜ್ ತಯಾರಾಗಿದ್ದಾರೆ. ಇದರ ಜೊತೆಗೆ ಪಿ. ಸತ್ಯ ಹಾಗೂ ಶಿವರಾಜ್ ಜೋಡಿ 'ಡಾನ್' ಚಿತ್ರದ ನಂತರ ಮತ್ತೆ ಒಂದಾಗಿ 'ಹೊಡಿಮಗ ' ಎಂಬ ಚಿತ್ರವನ್ನು ನೀಡಲಿದೆ. ಈ ಚಿತ್ರ ಅಗಸ್ಟ್ ಎರಡನೇ ವಾರ ಸೆಟ್ಟೇರಲಿದೆ. ಪಟ್ಟಿ ಇಲ್ಲಿಗೆ ಮುಗಿಯುವುದಿಲ್ಲ ಕೆ. ಮಂಜು ನಿರ್ಮಾಣದ ಹೆಸರಿಡದ ಚಿತ್ರಕ್ಕೆ ಕೂಡ ಶಿವರಾಜ್ ನಾಯಕರಾಗಿದ್ದಾರೆ. ಶಿವರಾಜ್ ಗೆ 'ಸತ್ಯ ಇನ್ ಲವ್' ಯಶಸ್ವಿ ಗೊಳಿಸಿದ ನಿರ್ದೇಶಕ ರಾಘವಲೋಕಿ ಅವರ ಇನ್ನೊಂದು ಚಿತ್ರದಲ್ಲಿ ಕೂಡ ಶಿವರಾಜ್ ನಾಯಕ. 'ಸೆಪ್ಟೆಂಬರ್ 11' ಎಂಬ ಥ್ರಿಲ್ಲರ್ ಚಿತ್ರ ಕೂಡ ಕಾದಿದೆ. ಕೌಟುಂಬಿಕ ಹಿನ್ನೆಲೆಯ ಕಥೆಯುಳ್ಳ ಮೀರಾಜಾಸ್ಮಿನ್ ಜತೆಗಿನ 'ದೇವರುಕೊಟ್ಟತಂಗಿ' ಯನ್ನು ಮರೆಯುವಂತಿಲ್ಲ.ಒಟ್ಟಿನಲ್ಲಿ ಶಿವಣ್ಣನಿಗೆ ನಲವತ್ತರ ನಂತರ ಯೌವನ ಹುರುಪು, ಅವಕಾಶಗಳು ಮತ್ತೆ ಚಿಗುರೊಡೆದಿದೆ. 90 ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿ ಕೂಡ ಕನ್ನಡದ ಬಹುಬೇಡಿಕೆಯ ನಟ ಎಂಬ ಕೀರ್ತಿಯನ್ನು ಉಳಿಸಿ ಕೊಂಡಿರುವ ಪುಟ್ಟಸ್ವಾಮಿ ಅಲಿಯಾಸ್ ಶಿವರಾಜ್ ಅವರ ಯಶಸ್ಸು ಹೀಗೆ ಮುಂದುವರೆಸಲಿ ಎಂದು ನಮ್ಮ Kannadaigra ಹಾರೈಕೆ.
Wish you a very very happy birthday Shivana
DD

DD

No comments:

Powered by Blogger.